About Us
About Our Co-operative Society
About Our Co-operative Society's brief History, Primary Objectives, Vision and Mission.
ಪರಿಶಿಷ್ಟ ವರ್ಗಗಳ ಶ್ರೇಯೋಭಿವೃದ್ಧಿಗಾಗಿ, ಆರ್ಥಿಕ ಸುಧಾರಣೆಗಾಗಿ ಹಾಗೂ ಸ್ವಾವಲಂಬನೆಗಾಗಿ ಉಡುಪಿ ತಾಲೂಕಿನಲ್ಲಿ ದಿನಾಂಕ: 23-Feb-1977 ರಂದು ಕರ್ನಾಟಕ ಸಹಕಾರ ಸಂಘಗಳ ಕಾಯ್ದೆ ಮತ್ತು ನಿಯಮಗಳಡಿಯಲ್ಲಿ ರಚಿತವಾದ ಏಕೈಕ ಸಂಸ್ಥೆಯಾಗಿರುತ್ತದೆ. ದಿವಂಗv ಶ್ರೀ ಐ. ಬಿ. ನಾರಾಯಣ ನಾಯ್ಕ ಇದರ ಸ್ಥಾಪಕ ಅಧ್ಯಕ್ಷರಾಗಿದ್ದರು. ಪ್ರಸ್ತುತ ಶ್ರೀಯುತ ಕರುಣಾಕರ ನಾಯ್ಕ ಅವರ ಅಧ್ಯಕ್ಷತೆಯಲ್ಲಿ ಸಂಘವು ಕಾರ್ಯನಿರ್ವಹಿಸುತ್ತಿದೆ
1977 ರಿಂದ ಈವರೆಗೆ (43 ವರ್ಷಗಳ) ನಿರಂತರವಾಗಿ ಉಡುಪಿ ಜಿಲ್ಲೆಯಲ್ಲಿ ಸಂಘವು ಕಾರ್ಯನಿರ್ವಹಿಸುತ್ತಿದೆ.
ಈ ಸಹಕಾರ ಸಂಘದ ಮುಖ್ಯ ಉದ್ದೇಶಗಳು :-
- ಪರಿಶಿಷ್ಟ ವರ್ಗದ ಸದಸ್ಯರುಗಳಿಗೆ ಅರಣ್ಯ ಕಸುಬುಗಳಿಗೆ, ಹೈನುಗಾರಿಕೆ ಹಾಗೂ ಇತರ ಕೃಷಿಯೇತರ ಚಟುವಟಿಗಳಿಗೆ ಸಾಲ ನೀಡುವುದು ಹಾಗೂ ಅವರು ಉತ್ಪಾದಿಸಿದ ವಸ್ತುಗಳಿಗೆ ಉತ್ತಮ ಮಾರುಕಟ್ಟೆ ಒದಗಿಸುವುದು.
- ಕಿರು ಅರಣ್ಯ ಉತ್ಪನ್ನಗಳನ್ನು ಪರಿಶಿಷ್ಟ ವರ್ಗದವರಿಂದಲೇ ಸಂಗ್ರಹಿಸಿ ಅವುಗಳಿಗೆ ಉತ್ತಮ ಮಾರುಕಟ್ಟೆ ಒದಗಿಸುವುದು.
- ಪರಿಶಿಷ್ಟ ವರ್ಗದ ಸದಸ್ಯರ ನಿರುದ್ಯೋಗ ಸಮಸ್ಯೆ ನಿವಾರಿಸುವಲ್ಲಿ ಗುಡಿಕೈಗಾರಿಕೆ ಪ್ರಾರಂಭಿಸಲು ಆರ್ಥಿಕ ನೆರವು ನೀಡುವುದು. ಮರಗೆಲಸ ತರಬೇತಿ, ಹಾಗೂ ಸ-್ವಉದ್ಯೋಗದ ಬಗ್ಗೆ ತರಬೇತಿ ನೀಡುವುದು.
- ಮನೆ ನಿವೇಶನ, ಮನೆ ಖರೀದಿ, ಮನೆ ರಚನೆಗಾಗಿ ದೀರ್ಘಾವಧಿ ಸಾಲ ನೀಡುವುದು.
- ತನ್ನ ಕಾರ್ಯಕ್ಷೇತ್ರದಲ್ಲಿ ಶಾಖೆಗಳನ್ನು ತೆರೆದು ನಿಯಂತ್ರಿತ ಹಾಗೂ ಅನಿಯಂತ್ರಿತ ಆಹಾರ ಸಾಮಾಗ್ರಿಗಳನ್ನು ಸರಬರಾಜು ಮಾಡುವುದು ಹಾಗೂ ಬ್ಯಾಂಕಿAಗ್ ವ್ಯವಹಾರಗಳನ್ನು ನಡೆಸುವುದು.
- “ಸಿ” ತರಗತಿ ಸದಸ್ಯರಿಗೆ (ಇತರರಿಗೆ) ಸಾಲ ಸೌಲಭ್ಯವನ್ನು ಒದಗಿಸುವುದು.
ಸದಸ್ಯತನ:-
- ಸಂಘದ ಕಾರ್ಯವ್ಯಾಪ್ತಿಯಲ್ಲಿ ವಾಸಿಸುವ ಪರಿಶಿಷ್ಟ ಪಂಗಡದ ಜನರು “ಎ” ತರಗತಿ ಸದಸ್ಯರಾಗಬಹುದು.
- ದಾಖಲೆ:- ೩ ಪೋಟೊ, ಜಾತಿ ಪ್ರಮಾಣ ಪತ್ರ, ರೇಶನ್ ಕಾರ್ಡು ಜೆರಾಕ್ಸ್, ಆಧಾರ್ ಕಾರ್ಡು ಜೆರಾಕ್, ರೂ.588.50 ಪಾವತಿಸುವುದು.
- ಅರ್ಹತೆ:- ಸಂಘದಲ್ಲಿ ಪ್ರತಿವರ್ಷ ಯಾವುದೇ ರೀತಿಯ ಕನಿಷ್ಟ ರೂ.1000/-ನ್ನು ವ್ಯವಹಾರ ಮಾಡತಕ್ಕದ್ದು.